ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ಖ್ಯಾತ ಗಾಯಕರಾದ ಶ್ರೀ ಸೋನು ನಿಗಮ್ ಇವರ ಭೆಟ್ಟಿ.
Date : 09-02-2026
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ದಿನಾಂಕ:-09.02.2026ರಂದು ಖ್ಯಾತ ಬಹುಭಾಷಾ ಗಾಯಕರಾದ ಶ್ರೀ ಸೋನು ನಿಗಮ್ ಇವರು ಶ್ರೀಮಠಕ್ಕೆ ಭೆಟ್ಟಿ ಕೊಟ್ಟು ಸದ್ಗುರು ಶ್ರೀ ಸಿದ್ಧಾರೂಢರ ಹಾಗೂ ಸದ್ಗುರು ಶ್ರೀ ಗುರುನಾಥಾರೂಢರ ಗದ್ದುಗೆಗಳ ದರ್ಶನಾಶೀರ್ವಾದವನ್ನು ಪಡೆದುಕೊಂಡರು, ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯಕ ಮತ್ತು ಶ್ರೀಮಠದ ಸಿಬ್ಬಂದಿ ವರ್ಗದವರು, ಭಕ್ತರು ಉಪಸ್ಥಿತರಿದ್ದರು.